ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎ.20  ರಂದು ಹೊನ್ನಾವರ ಭಟ್ಕಳ ಕುಮಟಾ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

ಎ.20  ರಂದು ಹೊನ್ನಾವರ ಭಟ್ಕಳ ಕುಮಟಾ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

Thu, 18 Apr 2024 18:34:06  Office Staff   SOnews

ಭಟ್ಕಳ: ಹೆಸ್ಕಾಂ ಹೊನ್ನಾವರ ವಿಭಾಗದ ವ್ಯಾಪ್ತಿಯ ಹೊನ್ನಾವರ, ಭಟ್ಕಳ ಮತ್ತು ಕುಮಟಾ ತಾಲೂಕಿನಲ್ಲಿ ಎ.20 ಶನಿವಾರ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊನ್ನಾವರ ವಿಭಾಗದ ಹೊನ್ನಾವರ, ಮುರುಢೇಶ್ವರ ಹಾಗೂ ಕುಮಟಾ ಉಪಕೇಂದ್ರಗಳಲ್ಲಿ ನಿರ್ವಾಹಣ ಕಾರ್ಯ ಮತ್ತು ಮುರ್ಢೇಶ್ವರ-ಹೊನ್ನಾವರ 110 ಕೆವಿ ಮಾರ್ಗ ಹಾಗೂ ಕುಮಟಾ=ಶಿರಸಿ 110ಕೆವಿ ಮಾರ್ಗದಲ್ಲಿ ಜಂಪ್ ಗಳ ಬದಲಾವಣೆ, ನಿರ್ವಾಹಣಾ ಕಾರ್ಯ ಇಟ್ಟುಕೊಂಡಿರುವುದರಿಂದಾಗಿ ಎ.20 ಶನಿವಾರದಂದು ಭಟ್ಕಳ, ಕುಮಟಾ ಹಾಗೂ ಹೊನ್ನಾವರ ತಾಲೂಕು ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಹಕರು ಸಕರಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.  


Share: